ಭಾರತೀಯರು ಮತ್ತು ವೈಜ್ಞಾನಿಕ ಮನೋಭಾವ.

ಕನ್ನಡ ರೂಪಾಂತರ : ಅನಿತಾ ಮಂಜುನಾಥ

ಭಾರತೀಯರು ಅನುಸರಿಸುವ ಕಾಲಮಾನವು ಪುನರಾವರ್ತನೆಯಾಗುವಂತಹುದು.ಒಂದು ‘ಕಲ್ಪ ‘ದಲ್ಲಿ ನಾಲ್ಕು ‘ಯುಗ ‘ಗಳ ಒಂದು ಸಾವಿರ ಆವರ್ತನಗಳಿರುತ್ತದೆ. ಸತ್ಯ ಯುಗ, ತ್ರೇತಾ ಯುಗ, ದ್ವಾಪರ ಯುಗ, ಮತ್ತು ಕಲಿ ಯುಗ ಎಂಬ ನಾಲ್ಕು ಯುಗಗಳು ಸರದಿಯಂತೆ ಪುನರಾವರ್ತನೆ ಗೊಳ್ಳುತ್ತವೆ. ಪ್ರತಿ ಕಲ್ಪದ ಮುಕ್ತಾಯದಲ್ಲಿ ವಿಶ್ವವು ನಾಶಗೊಂಡು, ಮುಂದಿನ ಕಲ್ಪದ ಆರಂಭಕ್ಕಾಗಿ ಮರುಸೃಷ್ಟಿ ಗೊಳ್ಳುತ್ತದೆ. ಪ್ರತಿ ಕಲ್ಪವೂ ಬಿಲಿಯಾನ್ತರ ವರ್ಷಗಳನ್ನು ಒಳಗೊಂಡಿರುತ್ತದೆ. ಪ್ರಸ್ತುತ ಕಲ್ಪದಲ್ಲಿ ರಾಮಾಯಣವು ತ್ರೇತಾ ಯುಗದಲ್ಲೂ, ಮಹಾ ಭಾರತವು ದ್ವಾಪರ ಯುಗದಲ್ಲೂ ಘಟಿಸಿದುವು. ಈಗ ನಾವು ಇರುವ ಕಾಲ, ಕಲಿಯುಗ. ಆದ್ದರಿಂದ ಡಿಸೆಂಬರ್ 2012ಕ್ಕೆ ಪ್ರಪಂಚ ಕೊನೆಗೂಳ್ಳುತ್ತದೆ ಎಂಬ ಮಾತು ಎದ್ದಿತ್ತು. Continue reading “ಭಾರತೀಯರು ಮತ್ತು ವೈಜ್ಞಾನಿಕ ಮನೋಭಾವ.”

ಭಾರತ ಕಮ್ಯುನಿಸಂ ಅನ್ನು ಅಳವಡಿಸಿಕೊಳ್ಳಬೇಕೆ?

ಕನ್ನಡ ಅವತರಣಿಕೆ - ಅನಿತಾ ಮಂಜುನಾಥ.

ಇತ್ತೀಚಿನ ಕರೋನವೈರಸ್ ಸಾಂಕ್ರಾಮಿಕವಾಗಿ ಹರಾಡುತ್ತಿರುವ ಸಮಯದಲ್ಲಿ, ಹೆಚ್ಚುತ್ತಿರುವ ಜನರ ಸಂಖ್ಯೆಯನ್ನು ಎದುರಿಸಲು ಹೆಚ್ಚಿನ ಮೂಲಸೌಕರ್ಯಗಳ ಅಗತ್ಯವಿದೆ ಎಂದು ಚೀನಾ ಅರಿತುಕೊಂಡಿದೆ.  ಅವರು ಎರಡು ಆಸ್ಪತ್ರೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು (ಪೂರ್ವನಿರ್ಮಿತ ಕಟ್ಟಡ ಸಾಮಗ್ರಿಗಳಿಂದ – ಏಕೆಂದರೆ, ಅಂಥ ನಿರ್ಮಾಣವನ್ನು ತಳಪಾಯದಿಂದ ಶುರುಮಾಡಿ ಕಟ್ಟುವುದು ಹಾಗ್ವಾರ್ಟ್ ಗಳಿಗೆ ಮಾತ್ರ ಸಾಧ್ಯವೇನೋ!!!) ಮತ್ತು 10 ದಿನಗಳಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತಂದರು. ಇದಕ್ಕೆ ವ್ಯತಿರಿಕ್ತವಾಗಿ, ವಿಶ್ವ ಬ್ಯಾಂಕ್ ಮುಂಬೈನ ಭಾರತದ ಸಾಂತಾ ಕ್ರೂಜ್- ಚೆಂಬೂರ್ ಲಿಂಕ್ ರಸ್ತೆಯನ್ನು ‘ವಿಶ್ವದ ಅತ್ಯಂತ ವಿಳಂಬವಾದ ರಸ್ತೆ ಯೋಜನೆ’ ಎಂದು ಹೆಸರಿಸಿದೆ. Continue reading “ಭಾರತ ಕಮ್ಯುನಿಸಂ ಅನ್ನು ಅಳವಡಿಸಿಕೊಳ್ಳಬೇಕೆ?”