ಕನ್ನಡ ಅವತರಣಿಕೆ - ಅನಿತಾ ಮಂಜುನಾಥ.
ಧ್ವನಿ ಗ್ರಹಣ ಮತ್ತು ಪ್ರಸರಣ , ಇದೆರಡನ್ನೂ ನಿರ್ವಹಿಸಬಲ್ಲ ರೇಡಿಯೋದ ಆವಿಷ್ಕಾರಕ ಗುಗ್ಲಿಯೆಲ್ಮೋ ಮಾರ್ಕೊನಿ ಎಂಬುದು ಎಲ್ಲರಿಗೂ ತಿಳಿದಿದೆ. ವೈರ್ಲೆಸ್ ರೇಡಿಯೊ ಸಂವಹನ ಕ್ಷೇತ್ರದಲ್ಲಿ ಮಾಡಿದ ಕೆಲಸಕ್ಕಾಗಿ ಅವರು 1909 ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಗೆದ್ದರು. ಒಂದು ಶತಮಾನದ ನಂತರ, ಭಾರತೀಯ ವೈದ್ಯ ಜಗದೀಶ್ ಚಂದ್ರ ಬೋಸ್ ಸುಮಾರು 20 ವರ್ಷಗಳ ಹಿಂದೆಯೇ ಈ ಆವಿಷ್ಕಾರಗಳನ್ನು ಮಾಡಿದ ಕೀರ್ತಿಗೆ ಪಾತ್ರರಾದರು. ಆದರೆ, ಅವರು ತಮ್ಮ ಆವಿಷ್ಕಾರಗಳಿಗೆ ಪೇಟೆಂಟ್ ತೆಗೆದುಕೊಳ್ಳುವ ಬದಲು, ಅವುಗಳನ್ನು ಸಾರ್ವಜನಿಕಗೊಳಿಸಲು ಆಯ್ಕೆ ಮಾಡಿಕೊಂಡಿದ್ದರು. ಒಂದು ರೀತಿಯಲ್ಲಿ ಹೇಳುವುದಾದರೆ, ವಿಜ್ಞಾನದ ಅಂತಿಮ ಗುರಿ ಮಾನವೀಯತೆಗೆ ಪ್ರಯೋಜನವಾಗುವುದು ಎಂದು ಅವರು ಅರ್ಥಮಾಡಿಕೊಂಡಿದ್ದರು. ಅವರು ಆದರ್ಶ ವಿಜ್ಞಾನಿ. ಪ್ರಾಚೀನ ಭಾರತೀಯ ವೈದ್ಯ ಸುಶ್ರುತ ಒಂದು ರೀತಿಯ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಪ್ರಾವೀಣ್ಯತೆ ಹೊಂದಿದ್ದರು. ಅವರಿಂದ ಚಿಕಿತ್ಸೆ ಪಡೆಯಲು ಅಥವಾ, ಕಲಿಯಲು ದೂರದ ದೇಶಗಳಿಂದ ಬಂದ ಯಾವುದೇ ಜನರನ್ನು ಅವರು ಎಂದಿಗೂ ನಿರಾಸೆಗೊಳಿಸಿ ಹಿಂದಿರುಗುವಂತೆ ಮಾಡಲಿಲ್ಲ.ಜಗದೀಶ್ ಚಂದ್ರ ಬೋಸ್
ಪ್ರಸ್ತುತಕ್ಕೆ ಬರೋಣವೇ? 2013 ರಲ್ಲಿ, ಭಾರತೀಯ ಸುಪ್ರೀಂ ಕೋರ್ಟು, ಸಾಮಾನ್ಯವಾಗಿ ಬಳಸುವ ಕ್ಯಾನ್ಸರ್ ವಿರೋಧಿ ಔಷಧವಾದ ಗ್ಲಿವೇಕ್ ಗೆ, ನೋವಾರ್ಟಿಸ್ ಗೆ ಹಕ್ಕುಗಳನ್ನು ನೀಡುವಂತೆ ತೀರ್ಪು ನೀಡಿತು. ಯಾವುದೇ ಆವಿಷ್ಕಾರವನ್ನು ಅಲ್ಪ ಸ್ವಲ್ಪ ಮಾರ್ಪಾಡು ಮಾಡುತ್ತಾ, ಅದನ್ನು ಯಾವಾಗಲೂ ಪೇಟೆನ್ಟ್ ಒಳಗೆ ಇರುವಂತೆ ಮಾಡುವುದನ್ನು ಭಾರತೀಯ ಪೇಟೆನ್ಟ್ ಕಾನೂನು ಅನುಮತಿಸುವುದಿಲ್ಲ..ಮೇಲೆ ಪ್ರಸ್ತಾಪಿಸಿದ ಕ್ಯಾನ್ಸರ್ ಔಷಧಿಯ ಬಗೆಗಿನ ತೀರ್ಪು, ಭಾರತೀಯ ಪೇಟೆನ್ಟ್ ಕಾನೂನನ್ನು ಎತ್ತಿ ಹಿಡಿಯುವುದರಲ್ಲಿ ಮತ್ತು, ಜನರ ಅರೋಗ್ಯದ ಆಧಿಕಾರಕ್ಕೆಕುಮ್ಮಕ್ಕು ಕೊಡುವುದರಲ್ಲಿ ಸಫಲವಾಗಿದೆ.
ಕುದುರೆಗೆ ಕಡಿವಾಣ ಹಾಕುವ ಅವಶ್ಯಕತೆಯಿದೆ
ಬೌದ್ಧಿಕ ಆಸ್ತಿ ಹಕ್ಕುಗಳು, ಆಧುನಿಕ ಅರ್ಥದಲ್ಲಿ, 17 ನೇ ಶತಮಾನದಲ್ಲಿ ಬ್ರಿಟಿಷ್ ಸ್ಟ್ಯಾಚುಟ್ ಆಫ್ ಮೊನೊಪಲೀಸ್ ಮತ್ತು ಸ್ಟ್ಯಾಚುಟ್ ಆಫ್ ಆನ್ನೊಂದಿಗೆ ಪ್ರಾರಂಭವಾಯಿತು. ಹೊಸ ಆವಿಷ್ಕಾರ ಗಳನ್ನು ಪ್ರೋತ್ಸಾಹಿಸುವ ಸಲುವಾಗಿ, ಭಾರತ ಸರ್ಕಾರ, ಇತ್ತೀಚಿನವರೆಗೂ, ಪೇಟೆನ್ಟ್ ಅನ್ನು ಅಗತ್ಯವಿದ್ದಲ್ಲಿ, ಹಾಗೂ, ಸ್ವಲ್ಪ ಮಟ್ಟಿಗೆ ಮಾತ್ರ ನೀಡುತ್ತಿತ್ತು. ಬೌದ್ಧಿಕ ಆಸ್ತಿ ಹಕ್ಕುಗಳ ಪ್ರಯೋಜನಗಳು ಮತ್ತು ಅಗತ್ಯವು ನಿರ್ವಿವಾದವಾಗಿದೆ; ಉದಾಹರಣೆಗೆ, ಆಫ್ರಿಕಾದಲ್ಲಿ ವ್ಯಾಪಾಕವಾಗಿರುವ ನಕಲಿ ಲಸಿಕೆಯ ವಹಿವಾಟನ್ನು, ಮತ್ತು ಅದರಿಂದ ಉಂಟಾಗುವ ಸಾವುಗಳನ್ನು ತಡೆಲೋಸುಗ, ನಕಲಿ ಔಷಧಿ ಯ ವಿರುದ್ಧ ಕಾನೂನು ಜಾರಿಯಿರುವುದು. ಮತ್ತೊಂದೆಡೆ, ಜೀವ ರಕ್ಷಕ ಔಷಧಿಗಳ ಬೆಲೆಯನ್ನು ಗಗನಕ್ಕೇರಿಸುವುದರ ಮೂಲಕ, ಬೌದ್ಧಿಕ ಆಸ್ತಿ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಅವುಗಳ ಪೇಟೆಂಟ್ ಅವಧಿ ಮುಗಿದ ನಂತರ ಅಂದರೆ, 10 ರಿಂದ 15 ವರ್ಷಗಳ ನಂತರ ಮಾತ್ರ ಔಷಧಿಗಳನ್ನು ತಯಾರಿಸಲು ಜೆನೆರಿಕ್ ಔಷಧ ತಯಾರಕರಿಗೆ ಅವಕಾಶವಿದೆ.
ಕೋವಿಡ್ -19 ಸಂಬಂಧಿತ ಔಷಧಗಳು ಮತ್ತು ಲಸಿಕೆಗಳಿಗೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ತಾತ್ಕಾಲಿಕವಾಗಿ ಮನ್ನಾ ಮಾಡುವಂತೆ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ ನಿರ್ಣಯವನ್ನು ಪ್ರಾಯೋಜಿಸಿವೆ. ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಈ ಮನ್ನಾವನ್ನು ವಿರೋಧಿಸುತ್ತಿದ್ದು, ಲಸಿಕೆಗಳ ಸೀಮಿತ ದಸ್ತಾನಿನಿಂದ ತಮ್ಮ ಅಗತ್ಯಕ್ಕಿಂತ ಹೆಚ್ಚಿನ ಪಾಲನ್ನು ಸಂಗ್ರಹಿಸಿವೆ (ಕೆನಡಾ ಪ್ರತಿ ವ್ಯಕ್ತಿಗೆ 10 ಪ್ರಮಾಣಗಳನ್ನು ಸಂಗ್ರಹಿಸಿದೆ). ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಲಸಿಕೆಯ ಲಭ್ಯತೆಯನ್ನು ಕಡಿತಗೊಳಿಸಲು ಅವರು ಐಪಿಆರ್ ಬಳಸುತ್ತಿದ್ದಾರೆ. ಅಲ್ಲದೆ, ಕೋವಿಡ್ -19 ತಂತ್ರಜ್ಞಾನವನ್ನು ಸ್ವಯಂಪ್ರೇರಿತವಾಗಿ ಹಂಚಿಕೊಳ್ಳುವ ವೇದಿಕೆಯಾದ ಕೋಸ್ಟರಿಕಾದ ಕೋವಿಡ್ -19 ಟೆಕ್ನಾಲಜಿ ಆಕ್ಸೆಸ್ ಪೂಲ್ ಬಹುತೇಕ ಬಳಕೆಯಾಗಲಿಲ್ಲ. ಕಡ್ಡಾಯ ಪರವಾನಗಿಯಂತೆ ವ್ಯಾಪಾರ ಸಂಬಂಧಿತ ಬೌದ್ಧಿಕ ಆಸ್ತಿ ಹಕ್ಕುಗಳ ಒಪ್ಪಂದದಡಿಯಲ್ಲಿ ಅಸ್ತಿತ್ವದಲ್ಲಿರುವ ವಿನಾಯಿತಿಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳು ಬಳಸಬೇಕೆಂದು ಅವರು ಒತ್ತಾಯಿಸುತ್ತಾರೆ. ಆದರೆ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಇಂತಹ ಕ್ರಮಗಳನ್ನು ಕಡೆಗಣಿಸಿದರೆ, ಅಭಿವೃದ್ಧಿಶೀಲ ರಾಷ್ಟ್ರಗಳು ಡಬ್ಲ್ಯುಟಿಒನಲ್ಲಿ ದಾವೆ ಸಲ್ಲಿಸುವ ಬೆದರಿಕೆ ಹಾಕುತ್ತವೆ . ಕೆಲವು ವರ್ಷಗಳ ಹಿಂದೆ, ಈ ರಾಷ್ಟ್ರಗಳು ಕೆಲವು ಎಂ.ಎನ್.ಸಿಗಳೊಂದಿಗೆ, ನಕಲಿ ವಿರೋಧಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದವು, ಅದು ಭಾರತದಿಂದ ಜೆನೆರಿಕ್ಸ್ ಅನ್ನು ಸಾಗಿಸುವ ಹಡಗುಗಳನ್ನು ವಶ ಪಡಿಸಿಕೊಂಡಿದ್ದವು.
ಒಬ್ಬರ ಶ್ರಮದ ಫಲವಲ್ಲ
ಭಾರತದ ಸ್ಥಳೀಯ ಸಮುದಾಯಗಳ ಸ್ಥಳೀಯ ಜ್ಞಾನಕ್ಕೆ ಪೇಟೆಂಟ್ ಪಡೆಯುವುದಕ್ಕೆ, ಎಂಎನ್ಸಿಗಳ ಪ್ರಯತ್ನಗಳನ್ನು ಭಾರತ ವಿಫಲಗೊಳಿಸಿದೆ. ಚರ್ಮದ ರಕ್ಷಣೆಯ ಉತ್ಪನ್ನಗಳಲ್ಲಿ ಬೇವಿನ ಮತ್ತು ಅರಿಶಿನ ಬಳಕೆಗೆ ಕೆಲವು ಯುಎಸ್ ಸಂಸ್ಥೆಗಳು ಪೇಟೆಂಟ್ ಪಡೆದ ನಂತರ ನಾವು ನಮ್ಮ ಪಾಠವನ್ನು ಕಲಿತಿದ್ದೇವೆ ಮತ್ತು ಹಿಂದಿನ ಹಲವು ತಲೆಮಾರುಗಳ ಮೂಲಕ ಹರಿದುಬಂದ ಈ ಜ್ಞಾನವನ್ನು, ಮತ್ತು, ಪ್ರಯೋಜನಗಳನ್ನು ಹಂಚಿಕೊಳ್ಳಲು ನಿರಾಕರಿಸಿದ್ದೇವೆ.
ಕೋಲ್ಗೇಟ್-ಪಾಮೋಲೈವ್ ತನ್ನ ಜಾಯಿಕಾಯಿ ಮೌತ್ವಾಶ್ಗಾಗಿ ಪೇಟೆಂಟ್ ಸಲ್ಲಿಸಿತು ಆದರೆ ಇದನ್ನು ಭಾರತ ತನ್ನ ಸಾಂಪ್ರದಾಯಿಕ ಜ್ಞಾನ ಡಿಜಿಟಲ್ ಲೈಬ್ರರಿಯ ಮೂಲಕ ಯಶಸ್ವಿಯಾಗಿ ಎದುರಿಸಿತು. ಅದೃಷ್ಟವಶಾತ್, ಸ್ಥಳೀಯ ಸಮುದಾಯಗಳ ಹಕ್ಕುಗಳನ್ನು ಜೀವವೈವಿಧ್ಯತೆಯ ಸಮಾವೇಶ ಮತ್ತು ಅಂತರರಾಷ್ಟ್ರೀಯ ಬೀಜ ಒಪ್ಪಂದದಂತಹ ಇತರ ಒಪ್ಪಂದಗಳಿಂದ ಗುರುತಿಸಲಾಗಿದೆ. ಆದರೆ ಯುನೈಟೆಡ್ ಸ್ಟೇಟ್ಸ್ನ ‘ಆದ್ಯತಾ ವೀಕ್ಷಣೆ ಪಟ್ಟಿ’ ಮತ್ತು ‘ವಿಶೇಷ 301 ವಿಮರ್ಶೆ’ ಯಂತಹ ಕಾರ್ಯವಿಧಾನಗಳಿಂದ ಈ ಹಕ್ಕುಗಳು ಮತ್ತು ವಿನಾಯಿತಿಗಳನ್ನು ತಗ್ಗಿಸುವ ಪ್ರಯತ್ನಗಳು ಯಾವಾಗಲೂ ನಡೆಯುತ್ತವೆ.
ಆವಿಷ್ಕಾರಗಳು ಸಂಪೂರ್ಣ ಸ್ವಯಂ ನಿರ್ಮಿತವಲ್ಲ
ಎಲ್ಲಾ ಆವಿಷ್ಕಾರಗಳೂ, ಪೂರ್ವಕಾಲದಿಂದ ಬಂದಂತಹ ಜ್ಞಾನದ ಬುನಾದಿಯ ಮೇಲೆ ನಿರ್ಮಿತವಾದವು ಆ ಪೂರ್ವ ಕಾಲೀನರ .ಜ್ಞಾನವು ಹಲವು ತಲೆಮಾರುಗಳ ನಿರಂತರ ಶ್ರಮದ ಫಲವಾಗಿದೆ. ಹೀಗಾಗಿ, ಐಪಿಆರ್ ಚರ್ಚಾಸ್ಪದ ವಿಷಯವಾಗಿದೆ. ಐಪಿಆರ್ ಮಾನವ ಪ್ರಗತಿಗೆ ಉತ್ತೇಜನ ನೀಡಿದೆ ಎಂಬುದು ನಿರ್ವಿವಾದ. ಆದರೆ, ಅದನ್ನು ಹೆಚ್ಚು ದೂರ ತೆಗೆದುಕೊಂಡು ಹೋಗಬಾರದು. ಅದನ್ನು ಮಾನವೀಯತೆಯನ್ನು ಬದಿಗೊತ್ತಿ, ಲಾಭದ ಸಾಧನವನ್ನಾಗಿ ಮಾಡುವುದು ತರವಲ್ಲ. ಯುಎಸ್ಎ ಮೂಲದ ಗಿಲ್ಯಾಡ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯು ಜೆವಿರಿಕ್ ಡ್ರಗ್ ಮ್ಯಾನ್ಯುಫ್ಯಾಚುರರ್ಗಳಿಗೆ ಸ್ವಯಂಪ್ರೇರಿತ ಪರವಾನಗಿಗಳನ್ನು ನೀಡಿದೆ, ಅವರಲ್ಲಿ ಕೆಲವು ಭಾರತೀಯ, ಕೊವಿಡ್-19 ಔಷದಿಯಾದ ರೆಮೆಡೆಸ್ವಿರ್ ತಯಾರಿಕೆಗಾಗಿ ಇದು ಔಷಧದ ಮಾರಾಟದ ಮೇಲಿನ ರಾಯಧನವನ್ನು ಸಹ ಬಿಟ್ಟುಕೊಟ್ಟಿದೆ. ಈ ಹಿಂದೆ, ಇದು ಹೆಪಟೈಟಿಸ್ -ಸಿ ಯ ಔಷಧವಾದ ಸೋಫೋಬುವಿರ್ ಮಾರಾಟಕ್ಕೆ ಸ್ವಯಂಪ್ರೇರಿತ ಪರವಾನಗಿಗಳನ್ನು ನೀಡಿತ್ತು. ಇದು ಕಂಪನಿಗೆ ಲಾಭ ಗಳಿಸಲು ಅನುವು ಮಾಡಿಕೊಡುತ್ತದೆ, ಜೊತೆಗೆ ಸಾರ್ವಜನಿಕರಿಗೆ ಕೈಗೆಟುಕುವ ಔಷಧಿಗಳನ್ನು ಉಪಲಬ್ದಗೊಳಿಸುತ್ತದೆ . “ಮಾನವೀಯತೆಯಿಲ್ಲದ ವಿಜ್ಞಾನವು ಪಾಪಕ್ಕೆ ಸಮಾನ “ಎಂದು ಗಾಂಧೀಜಿಯವರು ಹೇಳಿದ್ದನ್ನು ಅವರು ಬಹುಶಃ ಕೇಳಿರಬಹುದು.