ನಾವು ಅದನ್ನು ಇರುವಂತೆಯೇ ಏಕೆ ಬಿಡಬಾರದು

ಕನ್ನಡ ಅವತರಣಿಕೆ - ಅನಿತಾ ಮಂಜುನಾಥ.

ಫಾರೆಸ್ಟ್ ಸರ್ವೆ ಆಫ್ ಇಂಡಿಯಾ ‘ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ಸ್’ ಎಂಬ ದ್ವೈವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ.  ಭಾರತದಲ್ಲಿನ ಅರಣ್ಯ ವ್ಯಾಪ್ತಿ ಮತ್ತು ವೈವಿಧ್ಯತೆಗೆ ಸಂಬಂಧಿಸಿದಂತೆ ಸರ್ಕಾರ ಸಿದ್ಧಪಡಿಸಿದ ಅಂಕಿಅಂಶಗಳನ್ನು ಇದು ವಿವರಿಸುತ್ತದೆ.  2017 ರ ವರದಿಯು ಕಾಡುಗಳ ಆರ್ಥಿಕ ಮೌಲ್ಯವನ್ನು ನಿರ್ಣಯಿಸಿ, ಅರಣ್ಯ ಸಂರಕ್ಷಣೆಯ ಅಗತ್ಯವನ್ನು ಒತ್ತಿಹೇಳಿತು.

ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು ಜೀವವೈವಿಧ್ಯ ಸಂರಕ್ಷಣೆ ಮತ್ತು ಪ್ರಾಣಿ ಮತ್ತು ಸಸ್ಯ ಪ್ರಭೇದಗಳ ಅಳಿವಿನ ತಡೆಗಟ್ಟುವಿಕೆಗೆ ಕರೆ ನೀಡುತ್ತವೆ.  ಅವರ ಸಂಶೋಧನಗಳ ಪ್ರಕಾರ , ಸಂಪೂರ್ಣ ಅಳಿವಿನತ್ತ ಸಾಗುತ್ತಿರುವ ಪ್ರತಿಯೊಂದು ಜೀವ ಪ್ರಬೇಧದೊಂದಿಗೆ , ಮಾನವ ಜನಾಂಗವು ಕೂಡ, ಅಳಿವಿನ ಸಮೀಪದಲ್ಲಿದೆ ಎಂದು ತೋರಿಸುತ್ತದೆ.  ವಾಯು ಮತ್ತು ನೀರಿನ ಮಾಲಿನ್ಯವನ್ನು ನಿಯಂತ್ರಿಸಬೇಕು ಏಕೆಂದರೆ ಅದು ಮಾನವರಲ್ಲಿ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

ನಾನು, ನನ್ನದು ಮತ್ತು ಹಣ

ಇವು ‘ಮಾನವಕೇಂದ್ರೀಯತೆ’ ಎಂದು ಕರೆಯುವ ಕೆಲವು ನಿದರ್ಶನಗಳು.  ಇದು ಒಂದು ಆಲೋಚನಾ ಪ್ರಕ್ರಿಯೆಯಾಗಿದ್ದು, ಅದರಿಂದಾಗಿ ಮನುಷ್ಯ, ತಾನೇ ಎಲ್ಲ ಕ್ರಿಯೆಯ ಅಥವಾ ಗುರಿಯ ಕೇಂದ್ರ ಎಂಬಂತೆ ಭಾವಿಸುತ್ತಾನೆ. ಮತ್ತೊಂದು ತುದಿಯಲ್ಲಿರುವ ‘ ಪರಿಸರ ಕೇಂದ್ರೀತ ಆಲೋಚನೆಯು ‘ಪ್ರಕೃತಿ ಮತ್ತು ಅದರ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತದೆ..  ಎರಡನ್ನು ಸಂಪೂರ್ಣವಾಗಿ ಪ್ರತ್ಯೇಕಿಸುವ ಒಂದು ಶ್ರೇಷ್ಠ ಉದಾಹರಣೆಯೆಂದರೆ ಪ್ರಾಣಿಗಳನ್ನು ಕೊಲ್ಲುವುದು.  ಕೆಲವೊಮ್ಮೆ, ಒಂದು ನಿರ್ದಿಷ್ಟ ಪ್ರಭೇದದ ಪ್ರಾಣಿಗಳ ಸಂಖ್ಯೆ ಮಿತಿಗಳನ್ನು ಮೀರಿ ಹೆಚ್ಚಾದಾಗ ಅಥವಾ ಆ ಪ್ರಾಣಿಗಳಿಂದ ಅಪಾಯದ ಭೀತಿ ಇದ್ದರೆ,, ಈ ಪ್ರಾಣಿಗಳನ್ನು ನಿಯಂತ್ರಿಸುವ ಸಲುವಾಗಿ ಅವುಗಳ ಹತ್ಯೆಯನ್ನು ನಡೆಸಲಾಗುತ್ತದೆ.  ಉದಾಹರಣೆಗೆ, ಆಸ್ಟ್ರೇಲಿಯಾದಲ್ಲಿ ಕಾಂಗರೂಗಳನ್ನು ಕೊಲ್ಲುವುದು, ಆಕ್ರಮಣಕಾರಿ ಬೀದಿ ನಾಯಿಗಳನ್ನು ಕೊಲ್ಲುವುದು, ಬೆಳೆ ಹೊಲಗಳ ಮೇಲೆ ದಾಳಿ ಮಾಡುವ ಕೋತಿಗಳನ್ನು ಕೊಲ್ಲುವುದು ಇತ್ಯಾದಿ. ಮಾನವ ಕೇಂದ್ರಿತವಾದಿಗಳು ಇದನ್ನು ಸಮರ್ಥಿಸುತ್ತಾರೆ ಏಕೆಂದರೆ ಮಾನವ ಹಿತಾಸಕ್ತಿಗಳನ್ನು ರಕ್ಷಿಸಬೇಕು.  ಆದರೆ ಪ್ರತಿ ಸಸ್ಯ ಅಥವಾ ಪ್ರಾಣಿಯು ತನ್ನಲ್ಲಿಯೇ ಒಂದು ಆಂತರಿಕ ಮೌಲ್ಯವನ್ನು ಹೊಂದಿದೆ ಎಂದು ಪರಿಸರ ಕೇಂದ್ರಿತರು ವಾದಿಸುತ್ತಾರೆ , ಅದು ಮನುಷ್ಯನ ಆಂತರಿಕ ಮೌಲ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ಇಲ್ಲ ಎಂದು ಪ್ರತಿಪಾದಿಸುತ್ತಾರೆ .

ಸ್ಪಷ್ಟವಾಗಿ, ವಾಸ್ತವದಲ್ಲಿ, ಮಾನವಕೇಂದ್ರೀಯತೆಯು ಮೇಲುಗೈ ಹೊಂದಿದೆ.  ಅನಿಯಂತ್ರಿತ ಬಂಡವಾಳಶಾಹಿಯೊಂದಿಗೆ ಸೇರಿಕೊಂಡು ಅವರು ಪ್ರಬಲವಾದ ಸಂಯೋಜನೆಯನ್ನು ಮಾಡುತ್ತಾರೆ, ಏಕೆಂದರೆ ಬಂಡವಾಳಶಾಹಿಗಳಿಗೆ ವೈಯಕ್ತಿಕ ಹಿತವೇ , ಪ್ರತಿಯೊಂದು ಕ್ರಿಯೆಯ ಮುಖ್ಯ ಗುರಿ..  ಒಟ್ಟಾಗಿ, ಅವರು ನೈಸರ್ಗಿಕ, ಮಾನವ, ಸಾಮಾಜಿಕ ಮತ್ತು ಇತರ ಎಲ್ಲ ಸಂಪನ್ಮೂಲಗಳನ್ನು ಲಾಭವನ್ನು ಪಡೆಯಲು ಬಳಸಿಕೊಳ್ಳುತ್ತಾರೆ.  ಇದು ಪ್ರತಿಯೊಂದು ವಿಷಯಕ್ಕೂ ಮತ್ತು ವಸ್ತುವಿಗೂ,ಬೆಲೆ ನಿಗದಿಪಡಿಸುತ್ತದೆ.  ಯಾವುದನ್ನೂ ಪವಿತ್ರ ಎಂದು ಪರಿಗಣಿಸುವುದಿಲ್ಲ.

ಆರ್ಥಿಕವಾಗಿ ಉತ್ಪಾದನೆ ಮಾಡುವುದಿಲ್ಲ, ಅಥವಾ, ಕುಟುಂಬಕ್ಕೆ ಭಾರವಾಗಿದ್ದಾರೆ, ಎಂಬ ಅನಿಸಿಕೆ ಬಂದಾಗ, ವಯೋ ವೃದ್ಧರನ್ನು, ವೃದ್ಧಾಶ್ರಮಕ್ಕೆ ಕಳಿಸಿಬಿಡಲಾಗುತ್ತದೆ.  ಅನುತ್ಪಾದಕ ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗುತ್ತದೆ., ಅವರ ಶ್ರಮದಾನದ ವರ್ಷಗಳಾಗಲಿ, ಅಥವಾ ಅವರ ಮೇಲೆ ಅವಲಂಬಿತರಾದ ಹಸಿದ ಜೀವಗಳಾಗಲಿ ಪರಿಗಣನೆಗೆ ಬರುವುದೇ ಇಲ್ಲ. ಪರಿಸರವಾದಿಗಳು ಜಾಗತಿಕ ತಾಪಮಾನದ ಏರಿಕೆ ಮತ್ತು ಹಿಮನದಿಗಳ ಕರಗುವಿಕೆಯ ಬಗ್ಗೆ ಗಂಟಲು ಹರಿದುಕೊಂಡು ಕೂಗುತ್ತಿದ್ದರೆ,, ನಿಗಮಗಳು ಮತ್ತು ಸರ್ಕಾರಗಳು ಹೊಸ ಹಿಮ ಮುಕ್ತ ಸಮುದ್ರ ಮಾರ್ಗಕ್ಕೆ ತಯಾರಿ ನಡೆಸುತ್ತಿವೆ, ಇದು ಆರ್ಕ್ಟಿಕ್‌ನಲ್ಲಿ ಈಗ ಕೆಲವು ವರ್ಷಗಳಲ್ಲಿ ಪ್ರಾರಂಭವಾಗಲಿದೆ.

ಭೂಮಿಯ ಪ್ರತಿ ಇಂಚು ಅತಿಕ್ರಮಣಕ್ಕೆ ಒಳಗಾಗುತ್ತಿದೆ..  ಹೊಸ, ಹೆಚ್ಚು ಶಕ್ತಿಶಾಲಿ ಸಾಧನಗಳನ್ನು ಬಳಸಿ ಭೂಮಿಯ ಶ್ವಾಸಕೋಶವಾಗಿರುವ ಮಳೆಕಾಡುಗಳನ್ನು ತ್ವರಿತಗತಿಯಲ್ಲಿ ಕತ್ತರಿಸಲಾಗುತ್ತಿದೆ.  ಕೇವಲ 13% ಸಾಗರಗಳು ಮಾತ್ರ ಮನುಷ್ಯರಿಂದ ಸ್ಪರ್ಷವಾಗದೆ ಉಳಿದಿದೆ..  ನಾವು ನಮ್ಮ ಸುತ್ತಲೂ ನೋಡುತ್ತೇವೆ.  ನಗರದ ತೆರೆದ ಸ್ಥಳಗಳಲ್ಲಿ ಎತ್ತರದ ಅಪಾರ್ಟ್‌ಮೆಂಟ್‌ಗಳು, ಉಪನಗರಗಳಲ್ಲಿನ ಹುಲ್ಲುಗಾವಲುಗಳನ್ನು ಕಸ ಸುರಿಯುವ ಲ್ಯಾನ್ಡ್ ಫಿಲ್ ಆಗುತ್ತದೆ, , ಫಲವತ್ತಾದ ಕೃಷಿ ಭೂಮಿಯನ್ನು ನಿಗಮಗಳಿಗೆ ಮಾರಾಟ ಮಾಡಲಾಗುತ್ತದೆ, ಅಥವಾ ರಸ್ತೆಗಳನ್ನು ನಿರ್ಮಿಸಲಾಗುತ್ತದೆ..  ಈ ಸಂಪನ್ಮೂಲಗಳಿಂದ ಗರಿಷ್ಠ ಲಾಭವನ್ನು ಪಡೆಯುವವರೆಗೆ, ಪಟ್ಟು ಬಿಡದೆ ವ್ಯವಹರಿಸಲಾಗುತ್ತದೆ..  ಉದಾಹರಣೆಗೆ, ಖಾಸಗಿ ಉದ್ಯಮವು ಉದ್ಯೋಗಿಗಳಿಗಾಗಿ ತೆಗೆದುಕೊಳ್ಳುವ ಎಲ್ಲಾ ಕ್ರಮಗಳಾದ ತರಬೇತಿ, ವೇತನ ಚೆಕ್ ಮತ್ತು ರಜಾದಿನಗಳು ಗರಿಷ್ಠ ಉತ್ಪಾದಕತೆಗಾಗಿಯೇ ಸಜ್ಜಾಗಿದೆ, , ನಿರಂತರವಾಗಿ ಉತ್ತಮ ಕೆಲಸ ಮಾಡಲು ನೌಕರರ ಮೇಲೆ ಒತ್ತಡಹಾಕುತ್ತವೆ.. ಇಲ್ಲವಾದರೆ ಕೆಲಸ ಕಳೆದುಕೊಳ್ಳುವ ಭೀತಿ ಹುಟ್ಟುಹಾಕುತ್ತವೆ. ಅವನು ಎಂದಿಗೂ ಒತ್ತಡರಹಿತವಾಗಿ ಕೆಲಸ ಮಾಡಲು ಸಾಧ್ಯವಿಲ್ಲ, ಅವನು ಆರಾಮದಾಯಕವಾದ ಕೆಲಸವನ್ನು ಮಾಡುತ್ತಾ, ವೇತನವನ್ನು ಗಳಿಸುತ್ತಾ, ಉತ್ತಮ ಜೀವನವನ್ನು ಹೊಂದಬಹುದೇ?  ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ಅವನನ್ನು ಇದ್ದಂತೆ ಬಿಡಲು ಸಾಧ್ಯವಿಲ್ಲವೇ?

ಜಾಗತಿಕ ಹಡಗು ಮಾರ್ಗಗಳು

ಹಾಗಾದರೆ, ನಾವು ಅದನ್ನು ಏಕೆ ಇರುವಂತೆ ಬಿಡಬಾರದು?  ಲಾಭ ಮತ್ತು ಲಾಭದಾಯಕತೆಯ ಮಸೂರದೊಳಗಿಂದ ಎಲ್ಲವನ್ನೂ ಏಕೆ ನೋಡಬೇಕು?  ಇದು ಯಾವಾಗಲೂ ಈ ರೀತಿಯಾಗಿತ್ತೇ?

ಮನುಷ್ಯನು ತನ್ನ ಬದುಕು ಮತ್ತು ಐಷಾರಾಮಕ್ಕಾಗಿ ತನ್ನ ಪರಿಸರದ ಮೇಲೆ ಹಿಡಿತ ಸಾಧಿಸಲು ಯಾವಾಗಲೂ ಬಯಸುತ್ತಾನೆ.  ಆದರೆ ಇತ್ತೀಚಗೆ ಪ್ರಕೃತಿ ತನಗಿಂತ ದೊಡ್ಡದು ಎಂದು ಅವರು ಗುರುತಿಸಿದರು.  ಅವರು ಹೆಚ್ಚಿನ ವಿಷಯಗಳ ಯೋಜನೆಯಲ್ಲಿ ಪಾಲ್ಗೊಂಡಿದ್ದರು.  ಈಗ ದುರಾಶೆ ಅಗತ್ಯವನ್ನು ಮೀರಿಸಿದೆ.  ತನ್ನ ಮನವರಿಕೆಯಂತೆ ಪ್ರಕೃತಿಯನ್ನು ಪಳಗಿಸಲು ಅವನು ಬಯಸುತ್ತಾನೆ.  ಆದರೆ, ಅವರು ಪ್ರಕೃತಿಯನ್ನು ಬಹಳ ಕೀಳಂದಾಜು ಮಾಡಿದ್ದಾರೆ;  COVID-19 ಸಾಂಕ್ರಾಮಿಕ, ಇದಕ್ಕೆ ಒಂದು ಉದಾಹರಣೆ.

ಮೌಲ್ಯ?  ಅಂದರೆ ಎಷ್ಟು ರೂಪಾಯಿ?

ನಮ್ಮ ಪೂರ್ವಿಕರು, ಭೂಮಿ ಮತ್ತು ಆಸ್ತಿಯನ್ನು ಹೇಗೆ ಬಿಟ್ಟುಕೊಟ್ಟರು ಅಥವಾ ಜೂಜಾಟ ಮಾಡಿದ್ದಾರೆಂದು ನಾವು ಕೇಳಿದ್ದೇವೆ.  ಗಳಿಸಿದ್ದನ್ನು ಎಲ್ಲರ ಉಪಯೋಗಕ್ಕಾಗಿ, ಬಳಕೆಗಾಗಿ ಖರ್ಚು ಮಾಡಿದರು.  ಸಂಪತ್ತು ಸಮುದಾಯ ಅಥವಾ , ಜಂಟಿ ಕುಟುಂಬಗಳಿಗಾಗಿ ವ್ಯಯವಾಗುತ್ತಿತ್ತು..  ಇದು ಪ್ರಸ್ತುತ ಕಾಲದ ಕುಟುಂಬಗಳಿಗೆ ತದ್ವಿರುದ್ಧವಾಗಿದೆ.  ಸಣ್ಣ ಕುಟುಂಬಗಳಲ್ಲಿನ ಸಂಪತ್ತನ್ನು ಕುಟುಂಬದವರು ತಮಗೆ ಮಾತ್ರ ವಿನಿಯೋಗಿಸುತ್ತಾರೆ, ಮತ್ತು ಬೇರೆ ಎಲ್ಲರನ್ನು ಹೊರಗಿಡಲಾಗುತ್ತದೆ.  ಅಪಾರ್ಟ್ಮೆಂಟ್ ಅಥವಾ ಕಾರುಗಳ ಅಥವಾ ಒಬ್ಬರು ಹೊಂದಬಹುದಾದ ಹೈ ಎಂಡ್ ಫೋನ್‌ಗಳ ಸಂಖ್ಯೆಗೆ ಇಂದು ಮಿತಿಯೇ ಇಲ್ಲ. ಏಕೆಂದರೆ ಸಹಬಾಳ್ವೆ ಮತ್ತು ಮೌಲ್ಯಗಳಿಗಿಂತ ಬೆಲೆ ಪಟ್ಟಿಗಳು ಹೆಚ್ಚು ಮಹತ್ವದ್ದಾಗಿವೆ.

ಗುಲಾಮಗಿರಿ

ಅನೇಕ ಆಕ್ರಮಣಕಾರರು ಭಾರತಕ್ಕೆ ಬಂದರು, ಆದರೆ, ಅಂತಿಮವಾಗಿ ಅವರು ಅದನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡರು.  ನಮ್ಮ ಸಮೃದ್ಧ ಭೂಮಿಯಿಂದ ಸೃಷ್ಟಿಯಾದ ಸಂಪತ್ತು, ಅವಳ ಜನರಲ್ಲಿಯೇ ಇತ್ತು.  ಆದರೆ ಬಿಳಿ ಸಾಮ್ರಾಜ್ಯಶಾಹಿಗಳು ಮತ್ತು ಬಂಡವಾಳಶಾಹಿಗಳು ಸ್ಥಳೀಯ ನಾಗರಿಕತೆಗಳನ್ನು ಹಾಳುಗೆಡವಿದರು .  ಅವರು ತಮ್ಮ ಲಾಭಕ್ಕಾಗಿ ಜನರನ್ನು ಮತ್ತು ಅವರ ಸಂಪನ್ಮೂಲಗಳನ್ನು ಬಳಸಿಕೊಂಡರು .  ವಸಾಹತೀಕರಣದ 200 ವರ್ಷಗಳಲ್ಲಿ ಭಾರತದ ರಾಷ್ಟ್ರೀಯ ಆದಾಯದ ಸುಮಾರು 9% ವಾರ್ಷಿಕವಾಗಿ ಬ್ರಿಟನ್‌ಗೆ ಸಲ್ಲುತ್ತಿತ್ತು..  ಮಾನವೀಯತೆಯ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾದ ಗುಲಾಮಗಿರಿ ಈ ಅವಧಿಯಲ್ಲಿ ಪ್ರಾರಂಭವಾಯಿತು.  ಮಿಲಿಯನ್ ಡಾಲರ್ ಪ್ರಶ್ನೆ, ಮಾನವರು ಎಂದಾದರೂ ಏನನ್ನಾದರೂ ಬಿಡಬಹುದೇ?  ಬಹುಶಃ ಇದು ಮಾನವಕುಲ ಎದುರಿಸುತ್ತಿರುವ ಸಂದಿಗ್ದಗಳಿಗೆ ಉತ್ತರವಾಗಿದೆ.

ಮುಂಬರುವ ಪೋಸ್ಟ್‌ಗಳಲ್ಲಿ ವಿಶ್ವದಾದ್ಯಂತದ ಸ್ಥಳೀಯ ನಾಗರಿಕತೆಗಳ ಮೇಲೆ ಸಾಮ್ರಾಜ್ಯಶಾಹಿಯ ಪ್ರಭಾವದ ಕುರಿತು ಇನ್ನಷ್ಟು!

 

 

Author: Mahima Prasad

Doctor, dog enthusiast, UPSC aspirant

2 thoughts on “ನಾವು ಅದನ್ನು ಇರುವಂತೆಯೇ ಏಕೆ ಬಿಡಬಾರದು”

  1. ಮೇಲ್ನೋಟಕ್ಕೆ ನಾವು ವಸಾಹತುಶಾಹಿಗಳಿಂದ ಸ್ವಾತಂತ್ರ್ಯ ಪಡೆದುಕೊಂಡಿದ್ದೇವೆ ಎಂದುಕೊಂಡರೂ ಜಾಗತಿಕವಾಗಿ ಅಲ್ಲಿಯ ಬಂಡವಾಳಶಾಹಿಗಳು ಇಂದು ಪರೋಕ್ಷವಾಗಿ ನಮ್ಮ ಸರಕಾರಗಳ ಮೇಲೆ ನಿಯಂತ್ರಣವನ್ನು ಹೊಂದಿದ್ದಾರೆ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: